ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022|156 ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳು.
ಭಾರತೀಯ ವಿಮಾನ ಪರಾಧಿಕಾರ (ಎಎಐ) ತನ್ನ ದಕ್ಷಿಣ ವಲಯದ ಕಚೇರಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ಕುರಿತು ಅಧಿಸೂಚನೆ ಪ್ರಕಟಿಸಿರುವ ಎಎಐ, ಕರ್ನಾಟಕ ಸೇರಿದಂತೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿ, ಮತ್ತು ಲಕ್ಷ ದ್ವೀಪ ರಾಜ್ಯಗಳ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಸೆಪ್ಟೆಂಬರ್ 1 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಜೂನಿಯರ್ ಅಸಿಸ್ಟೆಂಟ್ (ಆಫೀಸ್ ಮತ್ತು ಫೈಯರ್ ಸರ್ವಿಸ್ ಸೇರಿ) 142 ಹಾಗೂ ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್ ಮತ್ತು ಅಫಿಶಿಯಲ್ ಲ್ಯಾಂಗ್ವೇಜ್) 14 ಹುದ್ದೆಗಳು ಸೇರಿ ಒಟ್ಟು 156 ಹುದ್ದೆಗಳಿಗೆ ನೇಮಕ ನಡೆಯಲಿದೆ.
ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022 ಅಧಿಸೂಚನೆಯ ವಿವರಗಳು
ಸಂಸ್ಥೆ | ಭಾರತೀಯ ವಿಮಾನ ಪ್ರಾಧಿಕಾರ (AAI) |
ಉದ್ಯೋಗದ ಪ್ರಕಾರ | ಕೇಂದ್ರ ಸರಕಾರಿ ಉದ್ಯೋಗಗಳು |
ಪೋಸ್ಟ್ ಹೆಸರು | ಜೂನಿಯರ್ ಮತ್ತು ಸೀನಿಯರ್ ಅಸಿಸ್ಟೆಂಟ್ |
ಒಟ್ಟು ಹುದ್ದೆಗಳ ಸಂಖ್ಯೆ | 156 |
ಉದ್ಯೋಗ ಸ್ಥಳ | ಭಾರತ |
[wptb id=2319] [wptb id=2321]
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- ಜೂನಿಯರ್ ಅಸಿಸ್ಟೆಂಟ್ (ಆಫೀಸ್ ಮತ್ತು ಫೈಯರ್ ಸರ್ವಿಸ್) – 142 ಹುದ್ದೆಗಳು
- ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್ ಮತ್ತು ಆಫೀಸಿಯಲ್ ಲ್ಯಾಂಗ್ವೇಜ್) – 14 ಹುದ್ದೆಗಳು
BRO Recruitment 2022|Apply For 246 Supervisor Posts| Central Govt Jobs 2022.
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022|156 ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳು.
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- ಫೈಯರ್ ಸರ್ವಿಸ್ ವಿಭಾಗದ ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹತ್ತನೇ ತರಗತಿ ತೇರ್ಗಡೆಯಾಗಿ ಮೂರು ವರ್ಷಗಳ ಡಿಪ್ಲೋಮೋ (ಮೆಕ್ಯಾನಿಕಲ್/ಆಟೋಮೊಬೈಲ್/ಫೈಯರ್) ಮಾಡಿದವರು ಅರ್ಜಿ ಸಲ್ಲಿಸಬಹುದು.
- ಅಥವಾ ಕನಿಷ್ಠ ಶೇಕಡ 50ರಷ್ಟು ಅಂಕಗಳೊಂದಿಗೆ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದರು ಅರ್ಜಿ ಸಲ್ಲಿಸಬಹುದು.
- ಆಫೀಸ್ ವಿಭಾಗದ ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ ಪದವೀಧರರು ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
- ಅಕೌಂಟ್ ವಿಭಾಗದ ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಕಾಂ ಪದವೀಧರರಾಗಿದ್ದು 3-6 ತಿಂಗಳ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು.
- ಅಫೀಸಿಯಲ್ ಲಾಂಗ್ವೇಜ್ ವಿಭಾಗದ ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳ ಆಕಾಂಕ್ಷಿಗಳು ಇಂಗ್ಲಿಷ್/ಹಿಂದಿಯಲ್ಲಿ (ಪದವಿಯಲ್ಲಿ ಹಿಂದಿ/ಇಂಗ್ಲಿಷ್ ವೈಸಾವರ್ಸ-ವಿಷಯ ಆಯ್ಕೆ) ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
- ಇಲ್ಲಿನ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೂ ಕನಿಷ್ಠ 2 ವರ್ಷಗಳ ಸೇವಾನುಭವ ಕಡ್ಡಾಯ ಮಾಡಲಾಗಿದೆ.
ವಯೋಮಿತಿ ಸಡಿಲಿಕೆ
- ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವಯಸ್ಸಿನ ಮಿತಿ
- ಕನಿಷ್ಠ ವಯಸ್ಸಿನ ಮಿತಿ : 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ : 30 ವರ್ಷಗಳು
ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022 ಸಂಬಳದ ವಿವರಗಳು
- ಅಧಿಕೃತ ಅಧಿಸೂಚನೆಯನ್ನು ನೋಡಿ.
ಪ್ರಮುಖ ಸೂಚನೆ
- ಸೂಚಿತ ರಾಜ್ಯಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.
- ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಪ್ರತ್ಯೇಕವಾಗಿ ನೋಂದಣಿ ಮಾಡಿಸಬೇಕು.
- ಈಗಾಗಲೇ ಸರಕಾರಿ ಹುದ್ದೆಯಲ್ಲಿರುವ ಅಭ್ಯರ್ಥಿಗಳು ಸಂಬಂಧಿತ ಇಲಾಖೆಗಳಿಂದ ನಿರಪೇಕ್ಷಣ ಪತ್ರ ತೆಗೆದುಕೊಂಡು ಅರ್ಜಿ ಸಲ್ಲಿಸಬೇಕು.
- ಅಭ್ಯರ್ಥಿಗಳು ಸ್ವಂತ ಖರ್ಚಿನಲ್ಲಿ ನೇಮಕ ಪ್ರಕ್ರಿಯೆಗೆ ಹಾಜರಾಗಬೇಕು.
- ದೇಶದ ಯಾವುದೇ ಭಾಗದಲ್ಲಾದರೂ ಸೇವೆಗೆ ನಿಯೋಜನೆ ಮಾಡಬಹುದು.
- ನೇಮಕವಾದ ಬಳಿಕ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಸ್ಟೈಫಂಡ್ ನೀಡಲಾಗುತ್ತದೆ.
[wptb id=2319] [wptb id=2321]
ಅರ್ಜಿ ಶುಲ್ಕ
- ಮಹಿಳೆಯರು, ಎಸ್ಸಿ/ಎಸ್ ಟಿ ಮಾಜಿ ಸೈನಿಕರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
- ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 1000 ರೂ ಶುಲ್ಕ ಪಾವತಿಸಬೇಕು.
- ಆದರೆ ಎಲ್ಲಾ ಅಭ್ಯರ್ಥಿಗಳು ಕೋವಿಡ್ ಹಿನ್ನಲೆಯಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ನಿರ್ವಹಣೆಗಾಗಿ 90 ರೂಪಾಯಿ ಪಾವತಿಸಬೇಕು ಎಂದು ಎಎಐ ತಿಳಿಸಿದೆ.
ರಾಜ್ಯದಲ್ಲಿರುವ ಪರೀಕ್ಷಾ ಕೇಂದ್ರ
- ಬೆಂಗಳೂರು
ಸಹಾಯವಾಣಿ ಸಂಖ್ಯೆ
91 95131166392
ಭಾರತೀಯ ವಿಮಾನ ಪ್ರಾಧಿಕಾರ ನೇಮಕಾತಿ 2022|156 ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಆಗಸ್ಟ್ 01 2022.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30 2022.
- ಆನ್ಲೈನ್ ಪರೀಕ್ಷೆ ಡಿಸೆಂಬರ್ 2022
ನೇಮಕಾತಿಯ ಅಧಿಕೃತ ಲಿಂಕ್
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ