bmrcl recruitment 2023|ಗುತ್ತಿಗೆ ಆಧಾರದ ಮೇಲೆ 67 ಫೈಯರ್ ಮ್ಯಾನ್ ಮತ್ತು ಸೇಫ್ಟಿ ಆಫೀಸರ್ ಹುದ್ದೆಗಳು.

bmrcl recruitment 2023

BMRCL Recruitment 2023: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 67 ಫೈಯರ್ ಮ್ಯಾನ್ ಮತ್ತು ಭದ್ರತಾ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 20 2023 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

bmrcl recruitment 2023 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್(BMRCL)

ಪೋಸ್ಟ್ ಹೆಸರು : ಫೈರ್ ಮ್ಯಾನ್ ಮತ್ತು ಭದ್ರತಾ ಅಧಿಕಾರಿ

ಪೋಸ್ಟ್ ಸಂಖ್ಯೆ : 67

ಉದ್ಯೋಗ ಸ್ಥಳ : ಬೆಂಗಳೂರು

ಉದ್ಯೋಗದ ಪ್ರಕಾರ : ಕರ್ನಾಟಕ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.25,000 – 60,000/-ಪ್ರತಿ ತಿಂಗಳಿಗೆ

ಪೋಸ್ಟ್ ಗಳನ್ನು ಆಧರಿಸಿ ಹುದ್ದೆಯ ವಿವರಗಳು

ಮುಖ್ಯ ಅಗ್ನಿಶಾಮಕ ಅಧಿಕಾರಿ – 1 ಹುದ್ದೆಗಳು

ಫೈರ್ ಮ್ಯಾನ್ – 66 ಹುದ್ದೆಗಳು

KPSC Recruitment 2023|ಭರ್ಜರಿ 53 ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಪ್ರಾರಂಭ.

ವಿದ್ಯಾರ್ಹತೆಯ ವಿವರಗಳು

ಮುಖ್ಯ ಅಗ್ನಿಶಾಮಕ ಅಧಿಕಾರಿ: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯ ಅಥವಾ ವಿಶ್ವವಿದ್ಯಾನಿಲಯದಿಂದ ಫೈಯರ್ ಮತ್ತು ಸೇಫ್ಟಿ ವಿಷಯದಲ್ಲಿ B.sc ಪದವಿ ಪೂರ್ಣಗೊಳಿಸಿರಬೇಕು.

ಫೈರ್ ಮ್ಯಾನ್: ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ 12ನೇ ತರಗತಿ ಉತ್ತೀರ್ಣರಾಗಿರಬೇಕು.

ಅನುಭವದ ವಿವರಗಳು

ಮುಖ್ಯ ಅಗ್ನಿಶಾಮಕ ಅಧಿಕಾರಿ: ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆಯಿಂದ ನಿವೃತ್ತಿಯನ್ನು ಹೊಂದಿರಬೇಕು.

ಫೈರ್ ಮ್ಯಾನ್: ಸರಕಾರದಿಂದ ಮಾನ್ಯತೆ ಪಡೆದಿರುವ ಮಂಡಳಿಯಿಂದ ಸುರಕ್ಷತೆ (Safety and fire Certificate) ವಿಷಯದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ

ಮುಖ್ಯ ಅಗ್ನಿಶಾಮಕ ಅಧಿಕಾರಿ: ಗರಿಷ್ಠ ವಯಸ್ಸು 62 ವರ್ಷಗಳು.

ಫೈರ್ ಮ್ಯಾನ್: ಗರಿಷ್ಠ ವಯಸ್ಸು 25 ವರ್ಷಗಳು.

ವಯೋಮಿತಿ ಸಡಿಲಿಕೆ

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ನಿಯಮಗಳ ಪ್ರಕಾರ.

ಸಂಬಳದ ವಿವರಗಳು

ಮುಖ್ಯ ಅಗ್ನಿಶಾಮಕ ಅಧಿಕಾರಿ:ರೂ.60,000/-ಪ್ರತಿ ತಿಂಗಳಿಗೆ

ಫೈರ್ ಮ್ಯಾನ್:ರೂ.25,000/-ಪ್ರತಿ ತಿಂಗಳಿಗೆ

ಆಯ್ಕೆಯ ವಿಧಾನ

ಶಾರ್ಟ್ ಲಿಸ್ಟ್

bmrcl recruitment 2023|68 ಕಾರ್ಯನಿರ್ವಾಹಕ ಮತ್ತು ಸಹಾಯಕ ಇಂಜಿನಿಯರ್ ಹುದ್ದೆಗಳು.

bmrcl recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಕರ್ನಾಟಕ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಲಿಂಕ್ ಸಹಾಯದಿಂದ ಅಧಿಕೃತ ಅರ್ಜುನ ಮೂಲೆಯನ್ನು ಡೌನ್ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಅರ್ಜಿಯ ಹಾರ್ಡ್ ಪ್ರತಿಯನ್ನು ಈ ಕೆಳಗೆ ನೀಡಲಾಗಿರುವ ವಿಳಾಸಕ್ಕೆ ಪೋಸ್ಟ್ ಮುಖಾಂತರ ರವಾನಿಸುವುದು.

ವಿಳಾಸ,

ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, III ಮಹಡಿ, BMTC ಕಾಂಪ್ಲೆಕ್ಸ್, KH ರಸ್ತೆ, ಶಾಂತಿನಗರ, ಬೆಂಗಳೂರು 560 027

ವಿಶೇಷ ಸೂಚನೆ

ಈ ಹುದ್ದೆಗಳಿಗೆ ಆಯ್ಕೆ ಮಾಡುವ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇರೆಗೆ 1 ರಿಂದ 3 ವರ್ಷಗಳವರೆಗೆ ನೇಮಕ ಮಾಡಲಾಗುತ್ತದೆ.

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಮಾಡುತ್ತಿರುವ ಅಭ್ಯರ್ಥಿಯನ್ನು ಕೆಲಸದಿಂದ ತೆಗೆಯುವ 1 ರಿಂದ 3 ತಿಂಗಳ ಒಳಗಾಗಿ ನೋಟಿಸ್ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 21.03.2023

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20.04.2023

Last date to receive the signed print with supporting documents: 22.04.2023

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: english.bmrc.co.in

People Also Ask

 

Share this post