DRDO ನೇಮಕಾತಿ 2022|DRDO Recruitment 2022|1901 ಹುದ್ದೆಗಳಿಗೆ ಅರ್ಜಿ ಆಹ್ವಾನ.
ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಭರ್ಜರಿ ನೇಮಕಾತಿಗೆ ಮುಂದಾಗಿದೆ. 1075 ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಮತ್ತು 826 ಟೆಕ್ನಿಷಿಯನ್ ಹುದ್ದೆಗಳು ಸೇರಿ ಒಟ್ಟು 1901 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಡಿ ಆರ್ ಡಿ ಓ ಪರವಾಗಿ ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಈ ನೇಮಕ ಪ್ರಕ್ರಿಯೆಗಳನ್ನು ನಡೆಸಲಿದೆ. ಈಗಾಗಲೇ ಅಧಿಸೂಚನೆ ಪ್ರಕಟವಾಗಿದ್ದು ಸೆಪ್ಟೆಂಬರ್ 3 ರಿಂದ ಸೆಪ್ಟೆಂಬರ್ 23ರ ತನಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗ್ರಿಕಲ್ಚರ್, ಆಟೋಮೊಬೈಲ್ ಇಂಜಿನಿಯರಿಂಗ್, ಬಾಟನಿ, ಕೆಮಿಸ್ಟ್ರಿ, ಕೆಮಿಕಲ್ ಇಂಜಿನಿಯರಿಂಗ್, ಸಿವಿಲ್, ಕಂಪ್ಯೂಟರ್ ಸೈನ್ಸ್, ಜಿಯಾಲಜಿ ಸೇರಿದಂತೆ 20ಕ್ಕೂ ಹೆಚ್ಚು ವಿಷಯಗಳಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಾಗೆಯೇ ಎಲೆಕ್ಟ್ರಾನಿಕ್ಸ್, ಫಿಟ್ಟರ್ ಡಿಟಿಪಿ ಆಪರೇಟರ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್ ಸೇರಿದಂತೆ ವಿವಿಧ ವಿಷಯಗಳಲ್ಲಿ ಟೆಕ್ನಿಷಿಯನ್ಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದ ಬೆಂಗಳೂರು ಮತ್ತು ಮೈಸೂರು ಸೇರಿದಂತೆ ದೇಶದ ವಿವಿಧ ಕಡೆ DRDO ಕಚೇರಿಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
Table of Contents
- 1 DRDO Recruitment 2022 ಅಧಿಸೂಚನೆಯ ವಿವರಗಳು
- 2 DRDO Recruitment 2022 ಖಾಲಿ ಹುದ್ದೆಗಳ ವಿವರ
- 3 DRDO ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- 4 ವಯೋಮಿತಿ ಸಡಿಲಿಕೆ
- 5 ವಯಸ್ಸಿನ ಮಿತಿ
- 6 DRDO ನೇಮಕಾತಿ 2022 ಸಂಬಳದ ವಿವರಗಳು
- 7 ಹೇಗಿರಲಿದೆ ಪರೀಕ್ಷೆ
- 8 ಪ್ರಮುಖ ಸೂಚನೆ
- 9 ಅರ್ಜಿ ಶುಲ್ಕ
- 10 ಆಯ್ಕೆ ವಿಧಾನ
- 11 ರಾಜ್ಯದಲ್ಲಿ ಪರೀಕ್ಷಾ ಕೇಂದ್ರ
- 12 ಸಹಾಯವಾಣಿ ಸಂಖ್ಯೆ
- 13 ಪ್ರಮುಖ ದಿನಾಂಕಗಳು
- 14 ನೇಮಕಾತಿಯ ಅಧಿಕೃತ ಲಿಂಕ್
DRDO Recruitment 2022 ಅಧಿಸೂಚನೆಯ ವಿವರಗಳು
ಸಂಸ್ಥೆ | ಡಿ ಆರ್ ಡಿ ಓ (DRDO) |
ಉದ್ಯೋಗದ ಪ್ರಕಾರ | ಕೇಂದ್ರ ಸರಕಾರಿ ಉದ್ಯೋಗಗಳು |
ಪೋಸ್ಟ ಹೆಸರು | ವಿವಿಧ |
ಒಟ್ಟು ಹುದ್ದೆಗಳ ಸಂಖ್ಯೆ | 1902 |
ಉದ್ಯೋಗ ಸ್ಥಳ | ಭಾರತ |

DRDO Recruitment 2022 ಖಾಲಿ ಹುದ್ದೆಗಳ ವಿವರ
- ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ – 1075 ಹುದ್ದೆಗಳು
- ಟೆಕ್ನಿಷಿಯನ್ -826 ಹುದ್ದೆಗಳು
BRO Recruitment 2022|Apply For 246 Supervisor Posts| Central Govt Jobs 2022.
DRDO ನೇಮಕಾತಿ 2022|DRDO Recruitment 2022|1901 ಹುದ್ದೆಗಳಿಗೆ ಅರ್ಜಿ ಆಹ್ವಾನ.
DRDO ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವಿಷಯಕ್ಕೆ ಸಂಬಂಧಿಸಿದಂತೆ ಬಿಎಸ್ಸಿ ಅಥವಾ ಡಿಪ್ಲೋಮೋ ಇಂಜಿನಿಯರಿಂಗ್ ವ್ಯಾಸಂಗ ಪೂರ್ಣಗೊಳಿಸಿರಬೇಕು.
- ಟೆಕ್ನಿಷಿಯನ್ ಹುದ್ದೆಗಳ ಆಕಾಂಕ್ಷಿಗಳು ಎಸ್ ಎಸ್ ಎಲ್ ಸಿ ಬಳಿಕ ಆಯಾ ಟ್ರೇಡಿನಲ್ಲಿ ಐಟಿಐ ಕೋರ್ಸ್ ವ್ಯಾಸಂಗ ಮಾಡಿರಬೇಕು.
ವಯೋಮಿತಿ ಸಡಿಲಿಕೆ
- ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವಯಸ್ಸಿನ ಮಿತಿ
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 25 ವರ್ಷಗಳು
ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.
DRDO ನೇಮಕಾತಿ 2022 ಸಂಬಳದ ವಿವರಗಳು
- ರೂ.25,500-81,100/-ಪ್ರತಿ ತಿಂಗಳಿಗೆ
ಹೇಗಿರಲಿದೆ ಪರೀಕ್ಷೆ
- ಸೀನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ನಡೆಯುವ ಪರೀಕ್ಷೆಗೆ ಕ್ವಾಂಟಿಟೇಟಿವ್ ಎಬಿಲಿಟಿ, ಆಪ್ಟಿಟ್ಯೂಡ್, ಜನರಲ್ ಇಂಟಲಿಜೆನ್ಸ್ ಮತ್ತು ರಿಜನಿಂಗ್ ಎಬಿಲಿಟಿ, ಜನರಲ್ ಅವರ್ನೆಸ್, ಇಂಗ್ಲೀಷ್ ಭಾಷಾ ಜ್ಞಾನಕ್ಕೆ ಸಂಬಂಧಿಸಿದ 120 ಅಂಕಗಳ ಪ್ರಶ್ನೆಗಳಿರುತ್ತದೆ.
- ಟೆಕ್ನಿಷಿಯನ್ ಹುದ್ದೆಗೆ ಟ್ರೇಡ್ ಟೆಸ್ಟ್ ನಡೆಯಲಿದ್ದು, ಆಯಾ ಟ್ರೇಡ್ ಗೆ ಸಂಬಂಧಿಸಿದಂತೆ ಕೌಶಲ ಪರೀಕ್ಷೆ ನಡೆಯಲಿದೆ.
ಪ್ರಮುಖ ಸೂಚನೆ
- ಪರೀಕ್ಷಾ ದಿನಾಂಕವನ್ನು ಡಿ ಆರ್ ಡಿ ಓ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
- ಪರೀಕ್ಷೆಯಲ್ಲಿ ತಪ್ಪು ಅಂಕಗಳಿಗೆ ನೆಗೆಟಿವ್ ಅಂಕಗಳನ್ನು ನೀಡಲಾಗುವುದಿಲ್ಲ.
- ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕಾಗುತ್ತದೆ.
- ಡಿ ಆರ್ ಡಿ ಓ ಕಚೇರಿಗಳು, ಪ್ರಯೋಗಾಲಗಳು ಎಲ್ಲಿ ಬೇಕಾದರೂ ನೇಮಕ ಮಾಡಿಕೊಳ್ಳಬಹುದು..
- ಅಭ್ಯರ್ಥಿಗಳು ದೇಶದ ಯಾವುದೇ ಭಾಗದಲ್ಲಾದರೂ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಶುಲ್ಕ
- ಎಸ್ ಸಿ/ಎಸ್ ಟಿ/ಮಹಿಳೆಯರು/ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
- ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 100 ರೂ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.
ಆಯ್ಕೆ ವಿಧಾನ
- ಸಿ ಬಿ ಟಿ ಮತ್ತು ಸಂದರ್ಶನ
ರಾಜ್ಯದಲ್ಲಿ ಪರೀಕ್ಷಾ ಕೇಂದ್ರ
- ಬೆಂಗಳೂರು
ಸಹಾಯವಾಣಿ ಸಂಖ್ಯೆ
- 011-23882332/33/34
- 011-23819217
DRDO ನೇಮಕಾತಿ 2022|DRDO Recruitment 2022|1901 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಸೆಪ್ಟೆಂಬರ್ 3 2022.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 23 2022.
ನೇಮಕಾತಿಯ ಅಧಿಕೃತ ಲಿಂಕ್
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
