ಭಾರತೀಯ ಆಹಾರ ನಿಗಮ ನೇಮಕಾತಿ 2022|113 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಭಾರತೀಯ ಆಹಾರ ನಿಗಮವು ಮ್ಯಾನೇಜ್ಮೆಂಟ್ ಟ್ರೈನಿ/ಮ್ಯಾನೇಜರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆಯನ್ನು ಪ್ರಕಟಿಸಿದೆ. ಒಟ್ಟು 113 ಹುದ್ದೆಗಳು ಖಾಲಿ ಇವೆ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ವಿವಿಧ ಕಡೆ ಈ ನೇಮಕಾತಿ ನಡೆಯುತ್ತಿದೆ. ಆಗಸ್ಟ್ 27ರಿಂದ ಸೆಪ್ಟೆಂಬರ್ 26 ರ ತನಕ ಅರ್ಜಿ ಸಲ್ಲಿಸಲು ಅವಕಾಶವಿದೆ. ನೇಮಕಕ್ಕೆ ಕರ್ನಾಟಕದ ಏಳು ಕೇಂದ್ರಗಳು ಸೇರಿದಂತೆ ದೇಶದಾದ್ಯಂತ ವಿವಿಧ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಾಗುತ್ತದೆ. ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಎಫ್ ಸಿ ಐ ಸೂಚನೆಯಲ್ಲಿ ಪ್ರಕಟಿಸಿದೆ.
ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
Table of Contents
- 1 ಭಾರತೀಯ ಆಹಾರ ನಿಗಮ ನೇಮಕಾತಿ 2022 ಅಧಿಸೂಚನೆಯ ವಿವರಗಳು
- 2 ಭಾರತೀಯ ಆಹಾರ ನಿಗಮ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- 3 ಭಾರತೀಯ ಆಹಾರ ನಿಗಮ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- 4 ವಯೋಮಿತಿ ಸಡಿಲಿಕೆ
- 5 ವಯಸ್ಸಿನ ಮಿತಿ
- 6 ಭಾರತೀಯ ಆಹಾರ ನಿಗಮ ನೇಮಕಾತಿ 2022 ಸಂಬಳದ ವಿವರಗಳು
- 7 ಹೇಗಿರಲಿದೆ ನೇಮಕ ಪ್ರಕ್ರಿಯೆ?
- 8 ಪ್ರಮುಖ ಸೂಚನೆ
- 9 ಅರ್ಜಿ ಶುಲ್ಕ
- 10 ರಾಜ್ಯದಲ್ಲಿರುವ ಪರೀಕ್ಷಾ ಕೇಂದ್ರಗಳು
- 11 ಪ್ರಮುಖ ದಿನಾಂಕಗಳು
- 12 ನೇಮಕಾತಿಯ ಅಧಿಕೃತ ಲಿಂಕ್
ಭಾರತೀಯ ಆಹಾರ ನಿಗಮ ನೇಮಕಾತಿ 2022 ಅಧಿಸೂಚನೆಯ ವಿವರಗಳು
ಸಂಸ್ಥೆ | ಭಾರತೀಯ ಆಹಾರ ನಿಗಮ (FCI) |
ಉದ್ಯೋಗದ ಪ್ರಕಾರ | ಕೇಂದ್ರ ಸರಕಾರಿ ಉದ್ಯೋಗಗಳು |
ಪೋಸ್ಟ್ ಹೆಸರು | ಟ್ರೈನಿ ಮತ್ತು ಮ್ಯಾನೇಜರ್ |
ಒಟ್ಟು ಹುದ್ದೆಗಳ ಸಂಖ್ಯೆ | 113 |
ಉದ್ಯೋಗ ಸ್ಥಳ | ಭಾರತ |
ಭಾರತೀಯ ಆಹಾರ ನಿಗಮ ನೇಮಕಾತಿ 2022 ಖಾಲಿ ಹುದ್ದೆಗಳ ವಿವರ
- ಮ್ಯಾನೇಜ್ಮೆಂಟ್ ಟ್ರೈನಿಂಗ್
- ಮ್ಯಾನೇಜರ್
BRO Recruitment 2022|Apply For 246 Supervisor Posts| Central Govt Jobs 2022.
ಭಾರತೀಯ ಆಹಾರ ನಿಗಮ ನೇಮಕಾತಿ 2022|113 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಭಾರತೀಯ ಆಹಾರ ನಿಗಮ ನೇಮಕಾತಿ 2022 ವಿದ್ಯಾರ್ಹತೆಯ ವಿವರಗಳು
- ಮ್ಯಾನೇಜರ್ (ಜನರಲ್/ಡಿಪೋ/ಮೂಮೆಂಟ್) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪಡೆದಿರಬೇಕು.
- ಅಕೌಂಟ್ಸ್ ವಿಭಾಗದ ಮ್ಯಾನೇಜರ್ ಹುದ್ದೆಗೆ ಬಿಕಾಂ/ಎಂಬಿಎ (ಫೈನಾನ್ಸ್) ಓದಿದವರು ಅರ್ಜಿ ಸಲ್ಲಿಸಬಹುದು.
- ಟೆಕ್ನಿಕಲ್ ವಿಭಾಗದ ಹುದ್ದೆಗೆ ಬಿಎಸ್ಸಿ (ಕೃಷಿ) ಅರ್ಹತೆ ನಿಗದಿಪಡಿಸಲಾಗಿದೆ.
- ಸಿವಿಲ್ ಅಥವಾ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವೀಧರರು ಅದೇ ವಿಭಾಗದ ಮ್ಯಾನೇಜರ್ ಹುದ್ದೆಗೆ ಪ್ರಯತ್ನಿಸಬಹುದು.
- ಹಿಂದಿ ವಿಷಯದಲ್ಲಿ ಸ್ನಾತಕೋತ್ತರ ಪದವಿದರು ಹಿಂದಿ ವಿಭಾಗದ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.
ವಯೋಮಿತಿ ಸಡಿಲಿಕೆ
- ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವಯಸ್ಸಿನ ಮಿತಿ
- ಹಿಂದಿ ವಿಭಾಗದ ಮ್ಯಾನೇಜರ್ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷ ನಿಗದಿಪಡಿಸಲಾಗಿದೆ.
- ಉಳಿದೆಲ್ಲ ವಿಭಾಗಕ್ಕೆ 28 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.
ಭಾರತೀಯ ಆಹಾರ ನಿಗಮ ನೇಮಕಾತಿ 2022 ಸಂಬಳದ ವಿವರಗಳು
- ಅಧಿಕೃತ ಅಧಿಸೂಚನೆಯನ್ನು ನೋಡಿ.
ಹೇಗಿರಲಿದೆ ನೇಮಕ ಪ್ರಕ್ರಿಯೆ?
- ಆನ್ಲೈನ್ ಪರೀಕ್ಷೆ (ಎರಡು ಹಂತ) ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
- ಮೊದಲನೇ ಹಂತದಲ್ಲಿ ಇಂಗ್ಲಿಷ್ ಭಾಷೆ, ರೀಸನಿಂಗ್ ಎಬಿಲಿಟಿ, ನ್ಯೂಮೆರಿಕಲ್ ಆಪ್ಟಿಟ್ಯೂಡ್, ಜನರಲ್ ಸ್ಟಡಿ ಗೆ ಸಂಬಂಧಿಸಿದಂತೆ 100 ಅಂಕಗಳ 100 ಪ್ರಶ್ನೆಗಳಿರುತ್ತದೆ.
- ಬರೆಯಲು 1 ಗಂಟೆ ಸಮಯ ನೀಡಲಾಗುತ್ತದೆ.
- ಎರಡನೇ ಹಂತದ ಪರೀಕ್ಷೆಯು ಆಯಾ ವಿಭಾಗದ ಹುದ್ದೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುತ್ತದೆ.
- ಈ ಕುರಿತಾಗಿ ವಿಸ್ತೃತ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೋಡಬಹುದು.
- ಈ ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ ನೆಗೆಟಿವ್ ಅಂಕಗಳು ಇರುವುದಿಲ್ಲ.
- ಇದರಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ಮತ್ತು ದಾಖಲೆ ಪರಿಶೀಲನೆ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ಸೂಚನೆ
- ನೇಮಕಗೊಂಡರೆ ಮೊದಲಿಗೆ ಮ್ಯಾನೇಜ್ಮೆಂಟ್ ಟ್ರೈನಿಗಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
- ಇದು ತರಬೇತಿಯ ಅವಧಿಯಾಗಿದ್ದು ಅಭ್ಯರ್ಥಿಗಳಿಗೆ 40,000 ರೂ. ಸ್ಟೈಫಂಡ್ ನೀಡಲಾಗುತ್ತದೆ.
- ಇಲ್ಲಿ ಉಲ್ಲೇಖಿಸಿರುವ ವಿದ್ಯಾರ್ಹತೆ ಹೊರತಾಗಿ ಪೂರಕ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ಬಗ್ಗೆ ಅಧಿಸೂಚನೆಯಲ್ಲಿ ಮಾಹಿತಿ ಲಭ್ಯವಿದೆ.
- ಪ್ರವೇಶ ಪತ್ರಗಳನ್ನು ಎಫ್ ಸಿ ಐ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ. ಅಭ್ಯರ್ಥಿಗಳು ಅಲ್ಲಿಂದ ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
- ರಾಜ್ಯಗಳನ್ನು ವಲಯವಾರು ವಿಂಗಡಿಸಿ ಹುದ್ದೆಗಳನ್ನು ಹಂಚಲಾಗಿದೆ.
ಅರ್ಜಿ ಶುಲ್ಕ
- ಎಸ್ಸಿ/ಎಸ್ಟಿ/ಮಹಿಳೆಯರು ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ಇದೆ.
- ಉಳಿದಂತೆ ಎಲ್ಲಾ ವರ್ಗದವರು ಜಿಎಸ್‌ಟಿ ಸೇರಿ 800 ರೂ ಪಾವತಿಸಬೇಕು.
ರಾಜ್ಯದಲ್ಲಿರುವ ಪರೀಕ್ಷಾ ಕೇಂದ್ರಗಳು
- ಬೆಂಗಳೂರು
- ಬೆಳಗಾವಿ
- ಕಲಬುರಗಿ
- ಹುಬ್ಬಳ್ಳಿ
- ಧಾರವಾಡ
- ಮಂಗಳೂರು
ಭಾರತೀಯ ಆಹಾರ ನಿಗಮ ನೇಮಕಾತಿ 2022|113 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಆಗಸ್ಟ್ 27 2022.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 26 2022.
- ಆನ್ಲೈನ್ ಪರೀಕ್ಷೆ ಡಿಸೆಂಬರ್ 2022
ನೇಮಕಾತಿಯ ಅಧಿಕೃತ ಲಿಂಕ್
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ