ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ|ಒಟ್ಟು 300 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಅರ್ಜಿ ಸಲ್ಲಿಸಲು ಭಾರತೀಯ ಕರಾವಳಿ ಪಡೆಯು ನಾವಿಕರು ಮತ್ತು ಯಾಂತ್ರಿಕ ಹುದ್ದೆಗಳ ನೇಮಕಕ್ಕೆ 2023ರ ಜನವರಿಯಿಂದ ಆರಂಭಿಸಲಿರುವ ಕೋರ್ಸ್ ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಧಿಸೂಚನೆಯನ್ನು ಪ್ರಕಟಿಸಿದೆ. ಯಾಂತ್ರಿಕ ಹುದ್ದೆಗಳು ಸೇರಿ ಜನರಲ್ ಮತ್ತು ಡೊಮೆಸ್ಟಿಕ್ ವಿಭಾಗದಲ್ಲಿ ನಾವಿಕರು ಸೇರಿ ಒಟ್ಟು 300 ಹುದ್ದೆಗಳಿಗೆ ನೇಮಕ ನಡೆಯಲಿದೆ. ಸಪ್ಟೆಂಬರ್ 8 ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಸೆಪ್ಟೆಂಬರ್ 22 ಅರ್ಜಿ ಸಲ್ಲಿಸಲು ಕೊನೆಯ ದಿನವೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
Table of Contents
- 1 ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಅಧಿಸೂಚನೆಯ ವಿವರಗಳು
- 2 ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಖಾಲಿ ಹುದ್ದೆಗಳ ವಿವರ
- 3 ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ವಿದ್ಯಾರ್ಹತೆಯ ವಿವರಗಳು
- 4 ವಯೋಮಿತಿ ಸಡಿಲಿಕೆ
- 5 ವಯಸ್ಸಿನ ಮಿತಿ
- 6 ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಸಂಬಳದ ವಿವರಗಳು
- 7 ಹೇಗಿರಲಿದೆ ನೇಮಕ ಪ್ರಕ್ರಿಯೆ?
- 8 ಅರ್ಜಿ ಶುಲ್ಕ
- 9 ತರಬೇತಿ ಕೇಂದ್ರ
- 10 ಪ್ರಮುಖ ದಿನಾಂಕಗಳು
- 11 ನೇಮಕಾತಿಯ ಅಧಿಕೃತ ಲಿಂಕ್
ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಅಧಿಸೂಚನೆಯ ವಿವರಗಳು
ಸಂಸ್ಥೆ | ಭಾರತೀಯ ಕರಾವಳಿ ಪಡೆ (ICG) |
ಉದ್ಯೋಗದ ಪ್ರಕಾರ | ಕೇಂದ್ರ ಸರಕಾರಿ ಉದ್ಯೋಗಗಳು |
ಪೋಸ್ಟ್ ಹೆಸರು | ನಾವಿಕ ಮತ್ತು ಯಾಂತ್ರಿಕ್ |
ಒಟ್ಟು ಹುದ್ದೆಗಳ ಸಂಖ್ಯೆ | 300 |
ಉದ್ಯೋಗ ಸ್ಥಳ | ಭಾರತ |

ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಖಾಲಿ ಹುದ್ದೆಗಳ ವಿವರ
- ಯಾಂತ್ರಿಕ್
- ನಾವಿಕ
BRO Recruitment 2022|Apply For 246 Supervisor Posts| Central Govt Jobs 2022.
ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ|ಒಟ್ಟು 300 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ವಿದ್ಯಾರ್ಹತೆಯ ವಿವರಗಳು
- ಜನರಲ್ ಡ್ಯೂಟಿ ವಿಭಾಗದಲ್ಲಿ ನಾವಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿದ್ದು, ಪಿಯುಸಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿರಬೇಕು.
- ಡೊಮೆಸ್ಟಿಕ್ ವಿಭಾಗದಲ್ಲಿ ನಾವಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿರಬೇಕು.
- ಯಾಂತ್ರಿಕ ಹುದ್ದೆಗಳನ್ನು ಬಯಸುವವರು ಎಸ್ ಎಸ್ ಎಲ್ ಸಿ ತೇರ್ಗಡೆ ಹಾಗೂ ಡಿಪ್ಲೋಮೋ (ಎಲೆಕ್ಟ್ರಿಕಲ್/ಮೆಕ್ಯಾನಿಕಲ್/ಎಲೆಕ್ಟ್ರಾನಿಕ್ಸ್/ಟೆಲಿ ಕಮ್ಯುನಿಕೇಷನ್ ಇಂಜಿನಿಯರಿಂಗ್) ಓದಿರಬೇಕು.
- ಈ ಡಿಪ್ಲೋಮೋ ಕೋರ್ಸ್ ಮೂರು ವರ್ಷ ಅಥವಾ ನಾಲ್ಕು ವರ್ಷಗಳ ಅವಧಿಯದ್ದಾಗಿರಬೇಕು.
- ಪಿಯುಸಿ ಓದಿ, ಡಿಪ್ಲೋಮೋ ಓದಿದ್ದರು ಯಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ.
- ಈ ಅರ್ಹತೆಗೆ ಪೂರಕವಾದ ಕೆಲ ವಿಷಯಗಳಲ್ಲಿ ಡಿಪ್ಲೋಮೋ ಮಾಡಿದರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಈ ಬಗ್ಗೆ ಅಭ್ಯರ್ಥಿಗಳು ಅತಿ ಸೂಚನೆಯಲ್ಲಿ ವಿವರಗಳನ್ನು ಪಡೆಯಬಹುದು.
ವಯೋಮಿತಿ ಸಡಿಲಿಕೆ
- ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
ವಯಸ್ಸಿನ ಮಿತಿ
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: 22 ವರ್ಷಗಳು
ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.
ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ ಸಂಬಳದ ವಿವರಗಳು
- ಅಧಿಕೃತ ಅಧಿಸೂಚನೆಯನ್ನು ನೋಡಿ.
ಹೇಗಿರಲಿದೆ ನೇಮಕ ಪ್ರಕ್ರಿಯೆ?
- ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹರಿಗೆ ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುತ್ತದೆ.
- ಎಲ್ಲಾ ವಿಭಾಗಗಳಿಗೂ ಪ್ರತ್ಯೇಕ ಪರೀಕ್ಷೆ ಇರುತ್ತದೆ.
- ಆಯಾ ಹುದ್ದೆಗಾನುಸಾರ ಪರೀಕ್ಷಾ ಪಠ್ಯಕ್ರಮದ ಬಗ್ಗೆ ಅಧಿಸೂಚನೆಯಲ್ಲಿಯೂ ಮಾಹಿತಿ ನೀಡಲಾಗಿದೆ.
- ಇದರಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗುವುದು.
- ಇದರಲ್ಲೂ ಅರ್ಹತೆ ಪಡೆದರೆ ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
- ವೈದ್ಯಕೀಯ ಪರೀಕ್ಷೆಯನ್ನು ಐಎನ್ಎಸ್ ಚಿಲ್ಕದಲ್ಲಿ ನಡೆಸಲಾಗುತ್ತದೆ, ಹಾಗೂ ಆಯ್ಕೆಯಾದವರಿಗೆ ಇಲ್ಲಿಯೇ ತರಬೇತಿಯನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಹೊರತುಪಡಿಸಿ ಉಳಿದ ಎಲ್ಲಾ ವರ್ಗದ ಅಭ್ಯರ್ಥಿಗಳು 250 ರೂ ಶುಲ್ಕ ಪಾವತಿಸಬೇಕು.
- ಪರೀಕ್ಷಾ ಶುಲ್ಕ ಪಾವತಿದ ಅಭ್ಯರ್ಥಿಗಳಿಗೆ ಮಾತ್ರ ನೇಮಕ ಪ್ರಕ್ರಿಯೆಯ ಪ್ರವೇಶ ಪತ್ರ ನೀಡಲಾಗುವುದು.
ತರಬೇತಿ ಕೇಂದ್ರ
- ಐಎನ್‌ಎಸ್ ಚಿಲ್ಕಾ
ಭಾರತೀಯ ಕರಾವಳಿ ಪಡೆಯಲ್ಲಿ ಉದ್ಯೋಗ|ಒಟ್ಟು 300 ಹುದ್ದೆಗಳಿಗೆ ಅರ್ಜಿ ಆಹ್ವಾನ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಸೆಪ್ಟೆಂಬರ್ 8 2022.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 22 2022.
- ಕೋರ್ಸ್ ಆರಂಭ ಜನವರಿ 2023
ನೇಮಕಾತಿಯ ಅಧಿಕೃತ ಲಿಂಕ್
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
