Indian Post office Recruitment 2023|ಭರ್ಜರಿ 53 ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

Indian Post office Recruitment 2023

Indian Post office Recruitment 2023: ಭಾರತೀಯ ಅಂಚೆ ಇಲಾಖೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಖಾಲಿ ಇರುವ 58 ಡ್ರೈವರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅಭ್ಯರ್ಥಿಗಳು ಮಾರ್ಚ್ 31 ಅಥವಾ ಅದಕ್ಕೂ ಮುಂಚಿತವಾಗಿ ಆಫ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದು.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆ ವಿವರಗಳು, ಅಗತ್ಯವಯಸ್ಸಿನ ಮಿತಿ, ವೇತನದ ವಿವರಗಳು, ಅರ್ಜಿ ಶುಲ್ಕ ಆಯ್ಕೆಯ ವಿಧಾನ ಮತ್ತು ಹೇಗೆ ಅರ್ಜಿ ಸಲ್ಲಿಸುವುದು ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. ಎಲ್ಲಾ ವಿವರಗಳನ್ನು ಸರಿಯಾಗಿ ಓದಿದ ಬಳಿಕವಷ್ಟೇ, ನೀವು ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಿ.

Indian Post office Recruitment 2023 ಅಧಿಸೂಚನೆಯ ಕಿರು ಮಾಹಿತಿ

ಸಂಸ್ಥೆಯ ಹೆಸರು : ಭಾರತೀಯ ಅಂಚೆ ಇಲಾಖೆ

ಪೋಸ್ಟ್ ಹೆಸರು : ಡ್ರೈವರ್

ಪೋಸ್ಟ್ ಸಂಖ್ಯೆ : 58

ಉದ್ಯೋಗ ಸ್ಥಳ : ಭಾರತದಾದ್ಯಂತ

ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ಉದ್ಯೋಗಗಳು

ಸಂಬಳ : ರೂ.19,900 – 63,200/-

ಪೋಸ್ಟ್ ಗಳನ್ನು ಆಧರಿಸಿ ಹುದ್ದೆಯ ವಿವರಗಳು

ಕಾರು ಚಾಲಕ

ವಿದ್ಯಾರ್ಹತೆಯ ವಿವರಗಳು

ಅಭ್ಯರ್ಥಿಗಳು 10ನೇ ತರಗತಿ ಪಾಸ್ ಆಗಿರಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ನೊಂದಿಗೆ 3 ವರ್ಷದ ಡ್ರೈವಿಂಗ್ ಅನುಭವವನ್ನು ಹೊಂದಿರಬೇಕು

ವಯೋಮಿತಿ

ಕನಿಷ್ಠ ವಯಸ್ಸು : 18 ವರ್ಷಗಳು

ಗರಿಷ್ಠ ವಯಸ್ಸು : 27 ವರ್ಷಗಳು

ವಯೋಮಿತಿ ಸಡಿಲಿಕೆ

ಭಾರತೀಯ ಅಂಚೆ ಇಲಾಖೆ ನೇಮಕಾತಿ ನಿಯಮಗಳ ಪ್ರಕಾರ.

ಅರ್ಜಿ ಶುಲ್ಕ ವಿವರಗಳು

  • Gen/OBC/EWS ಅಭ್ಯರ್ಥಿಗಳು : ರೂ.100
  • SC/ST ಮತ್ತು ಮಹಿಳಾ ಅಭ್ಯರ್ಥಿಗಳು : ಶೂನ್ಯ

ಸಂಬಳದ ವಿವರಗಳು

ರೂ.19,900 – 63,200/-

ಆಯ್ಕೆಯ ವಿಧಾನ

  • ಲಿಖಿತ ಪರೀಕ್ಷೆ 
  • ಚಾಲನಾ ಪರೀಕ್ಷೆ
  • ಡಾಕ್ಯುಮೆಂಟ್ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

Indian Post office Recruitment 2023|ಭರ್ಜರಿ 53 ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

Indian Post office Recruitment 2023 ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ

ಮೊದಲನೆಯದಾಗಿ ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

ಅಭ್ಯರ್ಥಿಗಳು ಕೆಳಗೆ ನೀಡಿರುವ ಲಿಂಕ್ ಸಹಾಯದಿಂದ ಅಧಿಕೃತ ಅರ್ಜಿ ಪ್ರತಿಯನ್ನು ಡೌನ್ ಲೋಡ್ ಮಾಡಿಕೊಂಡು ಸರಿಯಾದ ವಿವರಗಳೊಂದಿಗೆ ಭರ್ತಿ ಮಾಡಿ ಕೆಳಗೆ ನೀಡಿರುವ ಪೋಸ್ಟ್ ವಿಳಾಸಕ್ಕೆ ರವಾನಿಸುವುದು,

ಪೋಸ್ಟ್ ವಿಳಾಸ,

ಅಂಚೆ ಕಛೇರಿ ಇಲಾಖೆ, ಹಿರಿಯ ವ್ಯವಸ್ಥಾಪಕರು, ಮೇಲ್ ಮೋಟಾರ್ ಸೇವೆ, ಚೆನ್ನೈ – 600 006

ಪ್ರಮುಖ ದಿನಾಂಕಗಳು

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27.02.2023

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31.03.2023

ಅಧಿಸೂಚನೆಯ ಪ್ರಮುಖ ಲಿಂಕುಗಳು

ಅಧಿಕೃತ ಅಧಿಸೂಚನೆ ಮತ್ತು ಅಪ್ಲಿಕೇಶನ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್ಸೈಟ್ ಲಿಂಕ್: www.indiapost.gov.in

Indian Post office Recruitment 2023
Indian Post office Recruitment 2023
Share this post