ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ|ನವೆಂಬರ್ 6 ರಂದು ಪರೀಕ್ಷೆ ನಿಗದಿ.

Rate This Post

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ|ನವೆಂಬರ್ 6 ರಂದು ಪರೀಕ್ಷೆ ನಿಗದಿ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಕೊನೆಗೂ 2022ನೇ ಸಾಲಿನ ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ ಯ ದಿನಾಂಕ ಪ್ರಕಟಿಸಿದೆ. ಈ ಪರೀಕ್ಷೆಯು 2022ರ ನವಂಬರ್ 6 ರಂದು ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 30ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಗಳು, ಅಗತ್ಯ ವಯಸ್ಸಿನ ಮಿತಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ ಈ ಎಲ್ಲಾ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆಯ ವಿವರಗಳು

ಸಂಸ್ಥೆ ಸಾರ್ವಜನಿಕ ಶಿಕ್ಷಣ ಇಲಾಖೆ 
ಉದ್ಯೋಗದ ಪ್ರಕಾರ ಕರ್ನಾಟಕ ಸರಕಾರಿ ಉದ್ಯೋಗಗಳು
ಪರೀಕ್ಷೆಯ ಹೆಸರು ಶಿಕ್ಷಕರ ಅರ್ಹತಾ ಪರೀಕ್ಷೆ
ಪರೀಕ್ಷೆಯ ದಿನಾಂಕ  ನವಂಬರ್ 6
ಉದ್ಯೋಗ ಸ್ಥಳ ಕರ್ನಾಟಕ

 

[wptb id=2319] [wptb id=2321]

BRO Recruitment 2022|Apply For 246 Supervisor Posts| Central Govt Jobs 2022.

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ|ನವೆಂಬರ್ 6 ರಂದು ಪರೀಕ್ಷೆ ನಿಗದಿ.

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ ವಿದ್ಯಾರ್ಹತೆಯ ವಿವರಗಳು

  • 1 ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗಲು ಬಯಸುವವರು ಈ ಪರೀಕ್ಷೆ ಬರೆಯಬೇಕಾದರೆ ಸೀನಿಯರ್ ಸೆಕೆಂಡರಿ/ಪಿಯುಸಿ/ತತ್ಸಮಾನ ವಿದ್ಯಾರ್ಹತೆಯಲ್ಲಿ ಕನಿಷ್ಠ ಶೇಕಡ.50 (ಎಸ್ಸಿ/ಎಸ್ಟಿ ಅಭ್ಯರ್ಥಿಗಳು ಶೇಕಡ.45) ಅಂಕಗಳನ್ನು ಗಳಿಸಿರಬೇಕು.
  • ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮೋ ಪಡೆದಿರಬೇಕು ಅಥವಾ ವಿಶೇಷ ಶಿಕ್ಷಣದಲ್ಲಿ ಎರಡು ವರ್ಷಗಳ ಡಿಪ್ಲೋಮೋ ಹೊಂದಿರಬೇಕು.
  • ಬಿಇಡಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
  • ಇವರೆಲ್ಲರೂ ಪತ್ರಿಕೆ-1 ಅನ್ನು ಬರೆಯಲು ಅರ್ಹರಾಗಿರುತ್ತಾರೆ.
  • 6 ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿ ಪರೀಕ್ಷೆಯಲ್ಲಿ ಶೇ.50 ರಸ್ಟು ಅಂಕಗಳನ್ನು ಪಡೆದಿರಬೇಕು. ಎರಡು ವರ್ಷಗಳ D.El.Ed ಕೋರ್ಸಿನ ದ್ವಿತೀಯ ವರ್ಷದಲ್ಲಿ ತೇರ್ಗಡೆ ಹೊಂದಿರಬೇಕು. ಅಥವಾ ದ್ವಿತೀಯ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶದ ನಿರೀಕ್ಷೆಯಲ್ಲಿರುವವರು ಅಥವಾ ಪದವಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿರುವ ಮತ್ತು ಎರಡು ವರ್ಷದ ಬಿ. ಇಡಿ ಪದವಿಯಲ್ಲಿ ತೇರುಗಡೆಯಾಗಿರುವವರು ಅಥವಾ ಪಿಯುಸಿ/ಸೀನಿಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಶೇ.50 ಅಂಕಗಳನ್ನು ಗಳಿಸಿದ್ದು, ನಾಲ್ಕು ವರ್ಷಗಳ B.El.Ed ತೇರ್ಗಡೆ ಹೊಂದಿರುವವರು ಅಥವಾ ಪದವಿಯಲ್ಲಿ ಶೇ.50 ಅಂಕಪಡೆದಿದ್ದು ಎರಡು ವರ್ಷಗಳ ಬಿ. ಇಡಿ (ವಿಶೇಷ ಶಿಕ್ಷಣ) ಪದವಿಯಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
  • ಇವರು ಟಿಇಟಿ ಪರೀಕ್ಷೆಯಲ್ಲಿ ಪತ್ರಿಕೆ-2 ಅನ್ನು ಬರೆಯಲು ಅರ್ಹರಾಗಿರುತ್ತಾರೆ.
  • ಅಭ್ಯರ್ಥಿಯು 2 ಹಂತದ (1 ರಿಂದ 5 ಮತ್ತು 6 ರಿಂದ 8) ತರಗತಿಯಲ್ಲಿ ಭೋದಿಸಲು ಅಪೇಕ್ಷಿಸಿದ್ದಲ್ಲಿ ಪತ್ರಿಕೆ-1 ಮತ್ತು ಪತ್ರಿಕೆ-2 ಎರಡೂ ಪರೀಕ್ಷೆಗಳಿಗೂ ಹಾಜರಾಗಬೇಕಾಗುತ್ತದೆ.
[wptb id=2261]

ಅರ್ಜಿ ಸಲ್ಲಿಸುವುದು ಹೇಗೆ?

  • ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
  • ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ಹೊತ್ತುಕೊಳ್ಳುವಂತೆ ಕೋರಲಾಗಿದೆ.
  • ಪತ್ರಿಕೆ-1 ಮತ್ತು ಪತ್ರಿಕೆ-2 ರಲ್ಲಿ ಯಾವುದಾದರೂ ಒಂದು ಪತ್ರಿಕೆಯನ್ನು ತೆಗೆದುಕೊಳ್ಳುವವರು 700 ರೂ. ಪತ್ರಿಕಾ ಶುಲ್ಕ ಪಾವತಿಸಬೇಕಾಗುತ್ತದೆ.
  • ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 350 ರೂ. ನಿಗದಿಪಡಿಸಲಾಗಿದೆ.
  • ಎರಡು ಪತ್ರಿಕೆ ಬರೆಯಲಿಚ್ಚಿಸುವವರು 1000 ರೂ.(ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ 500 ರೂ.) ಪರೀಕ್ಷಾ ಶುಲ್ಕ ಪಾವತಿಸಬೇಕಾಗುತ್ತದೆ.
  • ಇಂಟರ್ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ ಗಳ ಮೂಲಕ ಶುಲ್ಕ ಪಾವತಿಸಬಹುದು.
  • ವಿಕಲಚೇತನ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ ಇರುತ್ತದೆ.

ಕೇಂದ್ರ ಸರ್ಕಾರದ ಹುದ್ದೆಗಳು 2022|Central Government Jobs 2022.

ಪ್ರಮುಖ ಸೂಚನೆ

  • ಟಿಇಟಿ ಶಿಕ್ಷಕರ ನೇಮಕಕ್ಕೆ ಅರ್ಹತಾ ಪರೀಕ್ಷೆಯ ಹೊರತು ನೇಮಕಾತಿ ಪರೀಕ್ಷೆಯಲ್ಲ.
  • ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆಗಳು ಭಾಷೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಬೋಧಿಸಲ್ಪಡುವ ಶಿಕ್ಷಕರಿಗೆ ಮಾತ್ರ ಅನ್ವಯಿಸುತ್ತದೆ.
  • ಎರಡು ವರ್ಷಗಳ ಡಿ ಎಲ್ ಇ ಡಿ ಕೊರ್ಸಿನ ದ್ವಿತೀಯ ವರ್ಷದ ವಾರ್ಷಿಕ/ಅಂತಿಮ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷೆಯಲ್ಲಿ ಇರುವವರು ಹಾಗೂ ಎರಡು ವರ್ಷದ ಬಿಇಡಿ ಕೊರ್ಸಿನ ಅಂತಿಮ ವರ್ಷದ/ಅಂತಿಮ ಸೆಮಿಸ್ಟರ್ನ ಪರೀಕ್ಷೆಗೆ ಹಾಜರಾಗಿ ಫಲಿತಾಂಶ ನಿರೀಕ್ಷಿಸುತ್ತಿರುವಂತಹ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆ ಬರೆಯಲು ತಾತ್ಕಾಲಿಕವಾಗಿ ಅನುಮತಿ ನೀಡಲಾಗಿದ್ದು, ಅಂತಿಮ ವರ್ಷದ/ಸೆಮಿಸ್ಟರ್ ನ ಪರೀಕ್ಷೆಯಲ್ಲಿ ನಿಗದಿತ ಅಂಕಗಳನ್ನು ಪಡೆದು ಉತ್ತೀರ್ಣತೆ ಹೊಂದಿದ್ದಲ್ಲಿ ಮಾತ್ರ ಕರ್ನಾಟಕ ಶಿಕ್ಷಕರ ಅರ್ಹತಾ ಪ್ರಮಾಣ ಪತ್ರ ಮಾನ್ಯ ಮಾಡಲಾಗುವುದು.
  • ಅಭ್ಯರ್ಥಿಗಳು ತಮ್ಮ ಆನ್ಲೈನ್ ಅರ್ಜಿಯಲ್ಲಿ ಭಾಷೆ-1 ಮತ್ತು ಭಾಷೆ-2 ನ್ನು ಸ್ಪಷ್ಟವಾಗಿ ನಮೂದಿಸುವುದು.
  • ಭಾಷೆಗಳನ್ನು ಆಯ್ಕೆ ಮಾಡುವಾಗ ಭಾಷೆ-1 ಮತ್ತು ಭಾಷೆ-2 ಒಂದೇ ಭಾಷೆ ಆಗಿರದಂತೆ ಎಚ್ಚರವಹಿಸಿ.
  • ಈ ಪರೀಕ್ಷೆಯಲ್ಲಿ ಕಲ್ಯಾಣ-ಕರ್ನಾಟಕದ ಅಭ್ಯರ್ಥಿಗಳಿಗೆ ಯಾವುದೇ ವಿನಾಯಿತಿ ನೀಡಲಾಗಿಲ್ಲ.
  • ರಾಜ್ಯದ ಎಲ್ಲಾ ಭಾಗದ ಅಭ್ಯರ್ಥಿಗಳಿಗೆ ಒಂದೇ ಮಾನದಂಡವನ್ನು ಅನುಸರಿಸಲಾಗುತ್ತದೆ.
  • ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪ್ರಮಾಣ ಪತ್ರವು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಜೀವಿತಾವಧಿಯವರೆಗೆ ಮಾನ್ಯತೆಯನ್ನು ಹೊಂದಿರುತ್ತದೆ.
  • ಅರ್ಹತಾ ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳಿಗೂ  ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಎಲೆಕ್ಟ್ರಾನಿಕ್ ಅಂಕಪಟ್ಟಿ ನೀಡಲಾಗುವುದು. ಕೇಂದ್ರೀಕೃತ ದಾಖಲಾತಿ ಘಟಕವು ಅಂಕಪಟ್ಟಿಯ ಮುದ್ರಿತ ಪ್ರತಿ ನೀಡುವುದಿಲ್ಲ.
  • ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ತಿಳಿಸಿರುವಂತೆ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಎಲೆಕ್ಟ್ರಾನಿಕ್ ಅಂಕಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು..
[wptb id=2319] [wptb id=2321]

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ|ನವೆಂಬರ್ 6 ರಂದು ಪರೀಕ್ಷೆ ನಿಗದಿ.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್: 30, 2022.
  • ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳುವುದು: ಅಕ್ಟೋಬರ್ 20ರ ನಂತರ
  • ಪರೀಕ್ಷಾ ಕೇಂದ್ರ: ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ

ನೇಮಕಾತಿಯ ಅಧಿಕೃತ ಲಿಂಕ್

 

ಶಿಕ್ಷಕರ ಅರ್ಹತಾ ಪರೀಕ್ಷೆ ಅಧಿಸೂಚನೆ ಪ್ರಕಟ|ನವೆಂಬರ್ 6 ರಂದು ಪರೀಕ್ಷೆ ನಿಗದಿ.

 

Spread the love